V.V.Sangha

ವೀರಶೈವ ವಿದ್ಯಾವರ್ಧಕ ಸಂಘ ಬಳ್ಳಾರಿ

VEERASHAIVA VIDYAVARDHAKA SANGHA BALLARI

ನಮ್ಮ ಬಗ್ಗೆ | Our story

Veerashaiva Vidyavardhaka Sangha has been imparting education since hundred years, maintaining standards, in keeping with the changing times, with unflagging dedication and devotion. The Sangha has reached successfully, with pride and satisfaction, the historic moment of celebrating the glorious achievements.

In pre-independent India, Bellary was in the vast region of Madras Presidency, under the British Rule, consisting of twenty talukas. Several confusing and uncertain causes made Bellary District literally, a backward area, political uncertainties, in an administration with no method in its madness, un-scientific division of taluks with constant alterations, limited educational avenues and uncertain syllabi and— most of all— the great distance from Madras which was the “centre” of administration, leading to a negligent attitude….. these were the several causes.

Naturally, this orphaned District for over a century and a half was termed BACK Districts area. Owing to such political uncertainties and un-scientific administrative reasons, the social conditions were deplorable. Hence it was felt that educational facilities would be a panacea for all the problems, a basic need realising that poverty, illiteracy and un-employment are making the society suffer from social imbalances. Intellectuals of the Veerasaiva society of the times evolved remedial measures for eradicating that plight that was enveloping all caste, creed and colour of the society.

Before the dawn of the independence, District and Taluka Boards in their token Aid, provided in a limited way funds for formal education in the schools; in the same way, the Christian Missionaries had provided education evidently with religious aim! Having understood the limited scope for providing only primary and secondary education, the stalwarts of the Veerasaiva community, realizing their responsibility to voluntarily accepting the burden, established the Veerasaiva Vidyavardhaka Sangha.  

CLICK HERE FOR MORE INFO

ವೀರಶೈವ ವಿದ್ಯಾವರ್ಧಕ ಸಂಘ, ಬಳ್ಳಾರಿ

ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಇಪ್ಪತ್ತು ತಾಲೂಕುಗಳನ್ನು ಒಳಗೊಂಡು ಮದ್ರಾಸ್ ಪ್ರೆಸಿಡೆನ್ಸಿಯ ದೊಡ್ಡ ಪ್ರಾಂತ್ಯವಾಗಿದ್ದ ಬಳ್ಳಾರಿ ಜಿಲ್ಲೆಯು ಹಲವು ಅನಿಶ್ಚಿತ ಹಾಗೂ ಗೊಂದಲಗಳಿಂದಾಗಿ ಅಕ್ಷರಶಃ ಹಿಂದುಳಿದ ಪ್ರದೇಶವಾಗಿತ್ತು. ಅನಕ್ಷರತೆಯಿಂದ ಬಳಲುತಿದ್ದ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದು ವೀರಶೈವ ಸಮಾಜ. ಶಿಕ್ಷಣದಿಂದ ಮಾತ್ರ ಸಾಮಾಜಿಕ ಅಸಮಾನತೆ ದೂರವಾಗಿಸಲು ಸಾಧ್ಯ ಎಂದು ನಂಬಿದ್ದ ನಮ್ಮ ಹಿರಿಯರ ತ್ಯಾಗ ಮತ್ತು ಬಲಿದಾನ ಫಲವಾಗಿ 1916ರಲ್ಲಿ ವೀರಶೈವ ವಿದ್ಯಾವರ್ಧಕ ಸಂಘ ಸ್ಥಾಪನೆಯಾಯಿತು. ವಾಸ್ತವವಾಗಿ, ವೀರಶೈವ ವಿದ್ಯಾವರ್ಧಕ ಸಂಘದ ಸ್ಥಾಪನೆಯ ವಿಚಾರ ಮೂಡಿದ್ದು 1909ರಲ್ಲಿ. ಬಳ್ಳಾರಿಯಲ್ಲಿ 1909ರ ಡಿಸೆಂಬರ್ 27 ರಿಂದ 30 ರವರೆಗೆ ನಡೆದ ಅಖಿಲ ಭಾರತ ವೀರಶೈವ ಮಹಾಸಭಾದ ಐದನೇ ಮಹಾಧಿವೇಶನದಲ್ಲಿ ಶ್ರೀ.ಮ.ನಿ.ಪ್ರ.ಹಾನಗಲ್ ಕುಮಾರ ಶಿವಯೋಗಿಗಳ ಮತ್ತು ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಜಗದ್ಗುರು ಶ್ರೀ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರ ದೂರದರ್ಶಿತ್ವ ಮತ್ತು ದೃಢಸಂಕಲ್ಪದ ಮೇರೆಗೆ ಮಂಡಿತವಾದ ನಿರ್ಣಯದಲ್ಲಿ ವಿದ್ಯಾವರ್ಧಕ ಸಂಘವು ಅಂಕುರಗೊಂಡು, 1912ರಲ್ಲಿ ಪಲ್ಲವಿಸಿ, 1916ರಲ್ಲಿ ಹೂವಾಗಿ ಅರಳುವುದರ ಮೂಲಕ ಗುರು-ಹಿರಿಯರ ಸಂಕಲ್ಪಕ್ಕೆ ಮೂರ್ತರೂಪ ನೀಡಿತು. ಐವರು ಪದಾಧಿಕಾರಿಗಳು, ಇಪ್ಪತ್ತು ಸದಸ್ಯರ ಕಾರ್ಯಕಾರಿ ಸಮಿತಿಯನ್ನು ರೂಪಿಸಲಾಯಿತು. 1916ರ ಆಗಸ್ಟ್ ತಿಂಗಳಲ್ಲಿ ಬಳ್ಳಾರಿಯ ಚಾರಿತ್ರಿಕ ಮಹತ್ವದ ಸP್ಕÀರಿ ಕರೆಡೆಪ್ಪನವರ ಚೌಕಿಯಲ್ಲಿ ‘ವಿದ್ಯಾರ್ಥಿಗಳ ವಿಶ್ರಾಂತಿ ನಿಲಯ’ದ ಮೂಲಕ ವೀರಶೈವ ವಿದ್ಯಾವರ್ಧಕ ಸಂಘವು ಶಿಕ್ಷಣ ದಾಸೋಹವನ್ನು ಆರಂಭಿಸಿತು. ಕೌತಾಳ ಯಜಮಾನ್ ಗುರುಶಾಂತಪ್ಪನವರ ಅಧ್ಯಕ್ಷತೆಯಲ್ಲಿ ಹಾಗೂ ಹೀರದ ಕರಿಬಸಪ್ಪನವರ ಕಾರ್ಯದರ್ಶಿತ್ವದಲ್ಲಿ ವೀ.ವಿ.ಸಂಘದ ಕಾರ್ಯ ಆರಂಭವಾಯಿತು. ಸಂಘವು ತನ್ನ ಉದ್ದೇಶವನ್ನು ವಿಸ್ತರಿಸುವ ದೃಷ್ಟಿಗನುಗುಣವಾಗಿ ಜಿಲ್ಲೆಯಾದ್ಯಂತ ವಿದ್ಯಾಪ್ರಸಾರವನ್ನು ಪಸರಿಸಿತು. ಹೂವಿನಹಡಗಲಿ, ಹೊಸಪೇಟೆ, ಮುನಿರಾಬಾದ್, ಕುಡಿತಿನಿ, ಸಿರಗುಪ್ಪ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ತಂಬ್ರಹಳ್ಳಿಗಳಲ್ಲಿ ಅಲ್ಲದೆ ಕೊಪ್ಪಳ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಪ್ರೌಢ-ಪದವಿಪೂರ್ವ ಪದವಿ-ತಾಂತ್ರಿಕ ಔಷಧೀಯ ವಿಜ್ಞಾನ ಮಹಾವಿದ್ಯಾಲಯಗಳನ್ನು ಆರಂಭಿಸಿ ವಿದ್ಯಾಸೇವೆಯನ್ನು ನೀಡುತ್ತಿದೆ. ವೀರಶೈವ ವಿದ್ಯಾವರ್ಧಕ ಸಂಘವು 2017 ಸೆಪ್ಟಂಬರ್ 22 ಮತ್ತು 23ರಂದು ತನ್ನ ಶತಮಾನೋತ್ಸವದ ಸಂಭ್ರಮವನ್ನು ಆಚರಿಸಿಕೊಂಡಿತು. ಅವಿಭಜಿತ ಬಳ್ಳಾರಿ ಜಿಲ್ಲೆಯಾದ್ಯಂತ ನೂರು ವರ್ಷಗಳ ಸಾರ್ಥಕ ಶೈಕ್ಷಣಿಕ ಸೇವೆಯನ್ನು ನೀಡಿದ ಹೆಗ್ಗಳಿಕೆ ನಮ್ಮದು.

ಹೆಚ್ಚಿನ ಮಾಹಿತಿಗೆ

Logo of Veerashaiva Vidyavardhaka Sangha Ballari
100 Years Logo